Sponsored

KEA CASE Handover in CID

 

File name – KEA FDA ಪರೀಕ್ಷೆಯ ಕೇಸ್ ಸಿಐಡಿ ತನಿಖೆಗೆ

File Type- Artical

File language -Kannada

NEWS -Prajavani

Thanks to -Prajavani

Online updates from parajavani News paper

ಅಕ್ಟೋಬರ್ 28ರಂದು ಕೆಇಎ ವಿವಿಧ ನಿಗಮಗಳಲ್ಲಿನ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಿತ್ತು. ಕೆಲವು ಅಭ್ಯರ್ಥಿಗಳು ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ಜತೆಗೆ ಹಣದ ಒಪ್ಪಂದ ಮಾಡಿಕೊಂಡು ಆತನಿಂದ ಬ್ಲೂಟೂತ್ ಡಿವೈಸ್‌ಗಳನ್ನು ಪಡೆದು ಪರೀಕ್ಷೆಯ ದಿನವೇ ಬಂಧಿತರಾದರು. ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ನವೆಂಬರ್ 10ರಂದು ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ‌ ಬಂಧಿಸಲಾಯಿತು. ಆತನ ಬಂಧನವಾದ ಮರುದಿನವೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಕೆಇಎ ನೇಮಕಾತಿ ಅಕ್ರಮ: ಪೊಲೀಸರ ದಾರಿ ತಪ್ಪಿಸಿದ ಪಾಟೀಲ!
ಕೆಇಎ ನೇಮಕಾತಿ ಅಕ್ರಮ: ಪೊಲೀಸರ ದಾರಿ ತಪ್ಪಿಸಿದ ಪಾಟೀಲ!
ಇದನ್ನೂ ಓದಿ:ಕೆಇಎ ಪರೀಕ್ಷೆ ಅಕ್ರಮ: ಮಹಾರಾಷ್ಟ್ರದಲ್ಲಿ ಆರ್.ಡಿ. ಪಾಟೀಲ ಬಂಧನ
ಕೆಇಎ ಪರೀಕ್ಷೆ ಅಕ್ರಮ: ಮಹಾರಾಷ್ಟ್ರದಲ್ಲಿ ಆರ್.ಡಿ. ಪಾಟೀಲ ಬಂಧನ

‌‘ಪರೀಕ್ಷೆಯಲ್ಲಿ ಅಕ್ರಮ ಬ್ಲೂಟೂತ್ ಬಳಕೆಯ ಸಂಬಂಧ ರಾಜ್ಯದ ಎಂಟು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ತರಿಸಿಕೊಳ್ಳಲಾಗುವುದು. ನ್ಯಾಯಾಂಗ ಬಂಧನದ ಬಳಿಕ ಪ್ರಕರಣದ ಪ್ರಮುಖ ಹಾಗೂ ಇತರೆ ಆರೋಪಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವರು’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೇವ್ ಮಾಡಿಕೊಳ್ಳಲು ಸಿಗದ ಅವಕಾಶ: ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿರುವ ಆರ್‌.ಡಿ. ಪಾಟೀಲ ಶೇವ್ ಮಾಡಿಕೊಳ್ಳಲು ಅನುಮತಿ ಕೇಳಿದ. ಇದಕ್ಕೆ ಪೊಲೀಸರು ನಿರಾಕರಸಿದರು ಎಂದು ತಿಳಿದುಬಂದಿದೆ.

ವೈದ್ಯಕೀಯ ತಪಾಸಣೆ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಮುನ್ನ ಶೇವ್ ಮಾಡಿಕೊಳ್ಳಲು ಮನವಿ ಮಾಡಿದ್ದ. ಅದರ ಅಗತ್ಯ ಸದ್ಯಕ್ಕೆ ಇಲ್ಲ ಎಂದು ಪೊಲೀಸರು ಪಾಟೀಲನ ಬೇಡಿಕೆಯನ್ನು ತಳ್ಳಿ ಹಾಕಿದ್ದಾರೆ.

ಕಣ್ಣೀರು ಹಾಕಿದ ಪತ್ನಿ: ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿರುವ ಆರ್‌.ಡಿ. ಪಾಟೀಲನನ್ನು ಭೇಟಿಯಾದ ಆತನ ಪತ್ನಿ ಕಣ್ಣೀರು ಹಾಕುತ್ತಾ ವಾಪಸಾದರು.

ಆರ್.ಡಿ. ಪಾಟೀಲ ಸಹೋದರ ವಕೀಲ ಶಿವಕುಮಾರ ಜೊತೆಗೆ ಬಂದಿದ್ದಳು. ಪೊಲೀಸ್ ಠಾಣೆಯಲ್ಲಿ ಪತಿಯನ್ನು ಭೇಟಿಯಾದರು. ಠಾಣೆಯಿಂದ ಹೊರಬಂದು ಕಣ್ಣೀರು ಸುರಿಸುತ್ತಾ ಕಾರಿನಲ್ಲಿ ಕುಳಿತು ಮನೆಗೆ ತೆರಳಿದ್ದು ಕಂಡುಬಂತು.

‘ನಾಲ್ಕೈದು ತಂಡಗಳು 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆರ್.ಡಿ. ಪಾಟೀಲನನ್ನು ಬಂಧಿಸಿವೆ. ಸದ್ಯ ವಿಚಾರಣೆ ನಡೆಯುತ್ತಿದ್ದು, ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾನೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಮತ್ತೆ ವಶಕ್ಕೆ ಪಡೆಯಲಾಗುವುದು’ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದರು.

Posted in FDA

Leave a Reply

Your email address will not be published. Required fields are marked *