Sponsored

BCWD FREE COACHING NOTIFICATION 2023-24

2023, 24ನೇ ಸಾಲಿಗೆ UPSC, Banking ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

BCWD Free Coaching Application form 2023-24: ಕೇಂದ್ರ ಲೋಕಸೇವಾ ಆಯೋಗದ ಸಿಎಸ್‌ಇ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಪೂರ್ವ ತರಬೇತಿ ನೀಡಲು, ಹಿಂದುಳಿದ ವರ್ಗಗಳ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಹತೆ, ಇತರೆ ಮಾಹಿತಿ ಇಲ್ಲಿದೆ.

Date. 16.11.2023

ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿಗೆ ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಪಿಒ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಿದ್ದು, ಅರ್ಹರು ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2A, 3A, 3B ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-12-2023 ರವರೆಗೆ ಅವಕಾಶ ನೀಡಲಾಗಿದೆ.

 

ಅರ್ಹತೆ ಮತ್ತು ಸೂಚನೆಗಳು

1.ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೊಂದು ಪದವಿ ಪಡೆದಿರಬೇಕು.

2.ಅಭ್ಯರ್ಥಿಯು ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 3A, 3B ಗಳಿಗೆ ಸೇರಿದ ಅಭ್ಯರ್ಥಿಗಳಾಗಿರಬೇಕು.

3.ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ – ಗರಿಷ್ಠ ರೂ.5.00 ಲಕ್ಷಗಳು ಮೀರಿರಬಾರದು.

4.ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-12-2023.

 

5.ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

 

6.ಪರೀಕ್ಷಾ ಕೇಂದ್ರಗಳು, ದಿನಾಂಕ ಮತ್ತು ಸಮಯವನ್ನು ನಂತರದ ದಿನಗಳಲ್ಲಿ ಇಲಾಖಾ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 

ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‌ಸೈಟ್‌ https://bcwd.karnataka.gov.in ಅನ್ನು ನೋಡುವುದು.

ಸಹಾಯವಾಣಿ : 8050770004

 

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು

ಆಧಾರ್ ಕಾರ್ಡ್‌

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

ಪದವಿ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ

ಇ-ಮೇಲ್‌ ವಿಳಾಸ

ಮೊಬೈಲ್‌ ನಂಬರ್

ಇತರೆ ವೈಯಕ್ತಿಕ ವಿವರಗಳು.

ಇನ್ನೂ ಮುಂತಾದ ವಿಷಯಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 👇👇👇👇👇👇

 

ಅಭ್ಯರ್ಥಿಗಳಿಗೆ ಸೂಚನೆಗಳು 

ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ 🖇️👇

 

Apply online application 

ಮೇಲಿನ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ಆಧಾರ್ ಸಂಖ್ಯೆ, ಆಧಾರ್‌ ನಲ್ಲಿರುವಂತೆ ಹೆಸರು ನೀಡಿ. ಕ್ಯಾಪ್ಚಾ ಕೋಡ್‌ ಎಂಟರ್ ಮಾಡಿ. ನಂತರ ಸದರಿ ವೆಬ್‌ಪುಟದಲ್ಲಿ ‘Proceed’ ಎಂದಿರುವಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.ಮೇಲಿನ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ಆಧಾರ್ ಸಂಖ್ಯೆ, ಆಧಾರ್‌ ನಲ್ಲಿರುವಂತೆ ಹೆಸರು ನೀಡಿ. ಕ್ಯಾಪ್ಚಾ ಕೋಡ್‌ ಎಂಟರ್ ಮಾಡಿ. ನಂತರ ಸದರಿ ವೆಬ್‌ಪುಟದಲ್ಲಿ ‘Proceed’ ಎಂದಿರುವಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

🤝Share your friends

JOIN OUR TELIGRAM GROUP

🍀ನಮ್ಮ ಟೆಲಿಗ್ರಾಂ ಗ್ರೂಪ್ ಸೇರಲು

🌲ನಮ್ಮ what’s app group link

🌿ನಮ್ಮ what’s app ಚಾನಲ್ ಲಿಂಕ್

🙏🏻🙏🏻🙏🏻🙏🏻🙏🏻🙏🏻🙏🏻🙏🏻🤝Share your friends

 

 

Leave a Reply

Your email address will not be published. Required fields are marked *